ಸುದ್ದಿ ಮತ್ತು ಘಟನೆಗಳು
ತ್ವರಿತ ಲಿಂಕ್‍ಗಳು
ಪ್ರಾಂಶುಪಾಲರ ನುಡಿ,
ಪ್ರಿಯ ವಿದ್ಯಾರ್ಥಿ,
ರಾಷ್ಟ್ರೀಯ ಶಿಕ್ಷಣ ಸಮಿತಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ನಮ್ಮ ಕಾಲೇಜು, ಸುಮಾರು 50 ವರ್ಷಗಳಿಂದ ಮಲೆನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕ ಪದವಿ ಶಿಕ್ಷಣವನ್ನು ಹಾಗೂ ಪ್ರಸ್ತುತ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಶಿಕ್ಷಣವನ್ನು ನೀಡುತ್ತಾ ಬಂದಿದೆ.
ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಕಟಿಬದ್ದರಾಗಿರುವ ಉಪನ್ಯಾಸಕ ವೃಂದ, ಉತ್ತಮವಾದ ಶೈಕ್ಷಣಿಕ ಪರಿಸರ, ಸುಸಜ್ಜಿತ ಗಣಕೀಕೃತ ಗ್ರಂಥಾಲಯ ಮತ್ತು ಕಛೇರಿ, ಕಂಪ್ಯೂಟರ್ ಲ್ಯಾಬ್, ವ್ಯಾಯಾಮ ಶಾಲೆ, ತರಗತಿ ಕೊಠಡಿಗಳು, ಸುಸಜ್ಜಿತ ಸಭಾಂಗಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಿದೆ.
ಪಠ್ಯೆತೇರ ಚಟುವಟಿಕಗಳಾದ ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ, ಯುವ ರೆಡ್ ಕ್ರಾಸ್ ಮುಂತಾದವುಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತಾ ವಿದ್ಯಾರ್ಥಿಗಳ ಸರ್ವತೂಮುಖ ಬೆಳವಣಿಗೆಗೆ ಪೂರಕವಾದ ಉತ್ತಮ ವಾತಾವರಣವಿದೆ.
ಉತ್ತಮ ಶಿಕ್ಷಣ ನೀಡುವಲ್ಲಿ ಕಾಳಜಿಯನ್ನು ಹೊಂದಿರುವ, ಅತ್ಯಂತ ಅರ್ಪಿತ ಮನೋಭಾವನೆಯುಳ್ಳ ಆಡಳಿತ ವರ್ಗದ ಮಾರ್ಗದರ್ಶನ ಹಾಗೂ ಸಹಕಾರದಿಂದ ಕಾಲೇಜು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲನ್ನಡುತ್ತಾ ಸಾಗಿದೆ.
ನೂರಾರು ರ್ಚಾಟೆಡ್ ಅಕೌಂಟೆಟ್‍ಗಳನ್ನು, ತೆರಿಗೆ ಸಲಹೆಗಾರರನ್ನು, ಉದ್ಯಮಿಗಳನ್ನು, ವ್ಯಾಪಾರಿಗಳನ್ನು, ಸಮಾಜ ಸೇವಕರನ್ನು ರಾಷ್ಟ್ರಕ್ಕೆ ಅರ್ಪಿಸಿರುವ ನಮ್ಮ ಕಾಲೇಜು ರ್ಯಾಂಕುಗಳ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ನಮ್ಮ ಕಾಲೇಜಿಗೆ ವಿದ್ಯಾರ್ಥಿ ವೃಂದಕ್ಕೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಹಾಗೂ ಕಾಲೇಜಿನ ಪರವಾಗಿ ಆತ್ಮೀಯವಾದ ಸ್ವಾಗತ
Prof. H. M. Suresha,
ಪ್ರಾಂಶುಪಾಲರು, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಶಿವಮೊಗ್ಗ
ಅತ್ಯುತ್ತಮವಾದ ವೀಕ್ಷಣೆ 1600 X 900
ಕೃತಿಸ್ವಾಮ್ಯ © ಎ.ಟಿ.ಎನ್.ಸಿ.ಸಿ, ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ