ಸುದ್ದಿ ಮತ್ತು ಘಟನೆಗಳು
ತ್ವರಿತ ಲಿಂಕ್‍ಗಳು
ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ರಿ), ಶಿವಮೊಗ್ಗ


ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ, ನಮ್ಮ ರಾಷ್ಟ್ರ ಪಿತಾಮಹ ಮಹಾತ್ಮ ಗಾಂಧಿಯವರು ಗ್ರಾಮೀಣ ಶಕ್ಷಣದ ಗುಣಮಗಟ್ಟ ಮತ್ತು ಮಹಿಳಾ ಶಿಕ್ಷಣದ ಅಭಿವೃದ್ಧಿಯ ಅಗತ್ಯವನ್ನು ಒತ್ತಿಹೀಳಿದರು ಮತ್ತು ಈ ನಿಟ್ಟಿನಲ್ಲಿ ಅನೇಕ ಶಿಕ್ಷಣ ತಜ್ಞರನ್ನು ಹಾಗೂ ಶಿಕ್ಷಣ ಪ್ರೇಮಿಗಳನ್ನು ಪ್ರೇರೇಪಿಸುತ್ತಿದ್ದರು. ಗಾಂಧೀಜಿಯವರ ಈ ಕನಸನ್ನು ಹಿರಿಯ ಸ್ವಾತಂತ್ರ್ಯ ಯೋಧರು ಮತ್ತು ಶಿವಮೊಗ್ಗ ಸಾರ್ವಜನಿಕರು ಮೊದಲಿಗೆ ಮಹಾತ್ಮನ ಕರೆಗೆ ಪ್ರತಿಕ್ರಿಯಿಸಿದರು. 1946 ರಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ಸಮಿತಿಯನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿದರು. “ಮಲೆನಾಡಿನ ಹೆಬ್ಬಾಗಿಲು” ಎಂದು ಕರೆಯಲ್ಪಡುವ ಶಿವಮೊಗ್ಗ ಪಶ್ಪಿಮ ಘಟ್ಟದ ಬಹುಮುಖ್ಯ ಜಿಲ್ಲೆ, ಸುಂದರ ಪ್ರಕೃತಿಯ ಮಡಿಲಿನಲ್ಲಿ ಇರುವ ಈ ಜಿಲ್ಲೆಯ ಪ್ರಮುಖ ಬೆಳೆ ಅಡಿಕೆ.

ಈ ಪ್ರಾಂತ್ಯದ ಹಿರಿಯ ಮುತ್ಸದ್ಧಿಗಳಾಗಿದ್ದ ಶ್ರೀ.ಎಸ್.ವಿ. ಕೃಷ್ಣಮೂರ್ತಿ ರಾವ್ (ಉಪಾಧ್ಯಕ್ಷರು- ಲೋಕಸಭೆ), ಶ್ರೀ. ಹೆಚ್.ಎಸ್. ರುದ್ರಪ್ಪ (ಸಚಿವರು), ಶ್ರೀ. ಪಿ. ಮುರುಡಪ್ಪ, ಶ್ರೀ. ಆರ್.ಕೆ. ಜಯತೀರ್ಥಾಚಾರ್, ಶ್ರೀ.ಎಂ.ಎಸ್. ನರಸಿಂಹಮೂರ್ತಿ, ಶ್ರೀ. ಎಸ್.ಆರ್. ನಾಗಪ್ಪ ಶೆಟ್ಟಿ (ಶಾಸಕರು) ಹಾಗೂ ಇನ್ನಿತರ ಸಮಾಜ ಕಾರ್ಯಕರ್ತರು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸ್ಥಾಪಕ ಸದಸ್ಯರುಗಳು. ಸ್ವತಂತ್ರವಾಗಿ ಪ್ರೌಢಶಾಲೆಯನ್ನು ಆರಂಭಿಸಿ 1946ರಲ್ಲಿ ಸಾರ್ವಜನಿಕರ ಸಹಕಾರದಿಂದ ಸ್ವಂತ ಕಟ್ಟಡವನ್ನು ಕಟ್ಟಿಸಿದರು.
ಮಹಿಳಾ ಶಿಕ್ಷಣಕ್ಕೆ ಪ್ರಮುಖ್ಯತೆ ನೀಡುವ ನಿಟ್ಟಿನಲ್ಲಿ 1954ರಲ್ಲಿ ಬಾಲಕಿಯರ ಪ್ರೌಢಶಾಲೆಯನ್ನು ಆರಂಭಿಸಿದರು. ನಂತರದ ದಿನಗಳಲ್ಲಿ ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯ ಹಲವಾರು ಗ್ರಾಮಿಣ ಭಾಗಗಳಲ್ಲೂ ಶೈಕ್ಷಣಿಕ ಕೇಂದ್ರಗಳನ್ನು ಆರಂಭಿಸಿದರು.

ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಂಸ್ಥೆಗೆ ಭೇಟಿ ನೀಡುತ್ತಿದ್ದು, ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮುಕ್ತ ಪ್ರಶಂಸೆ ನೀಡುತ್ತಿದ್ದಾರೆ. ಅವರಲ್ಲಿ ಬಹಳ ಮುಖ್ಯವಾಗಿ ರಾಷ್ಟ್ರಧ್ಯಕ್ಷರಾಗಿದ್ದಂತಹ ಡಾ|| ರಾಜೇಂದ್ರಪ್ರಸಾದ್, ಡಾ|| ರಾಧಾಕೃಷ್ಣನ್ ಅಲ್ಲದೆ ದೇಶದ ಪ್ರಧಾನಿಗಳಾಗಿದ್ದ ಶ್ರೀ. ಲಾಲ್‍ಬಹದ್ಧೂರ್ ಶಾಸ್ತ್ರಿ, ಮೈಸೂರು ಸಂಸ್ಥಾನದ ಮಹರಾಜರಾಗಿದ್ದ ಶ್ರೀ. ಜಯಚಾಮರಾಜೇಂದ್ರ ಒಡೆಯರ್, ಸರ್ವೋದಯ ಚಳುವಳಿಯ ನೇತಾರ ಶ್ರೀ ವಿನೋಭಬಾವೆ ಹಾಗೂ ಅನವರತ ಚಳುವಳಿಯ ನೇತಾರ ಆಚಾರ್ಯ ತುಳಸಿ ಮುಂತಾದ ಗಣ್ಯರು ಭೇಟಿ ನೀಡಿ ಕಾಲೇಜಿನ ಘನತೆಯನ್ನು ಹೆಚ್ಚಿಸಿದ್ದಾರೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಹತ್ತು ಹಲವು ಸಮಸ್ಯೆಗಳು ದೇಶವನ್ನು ಕಾಡುತ್ತಿದ್ದ ಸಂದರ್ಭದಲ್ಲೂ ರಾಷ್ಟ್ರೀಯ ಶಿಕ್ಷಣ ಸಮಿತಿಯು ತನ್ನ ಶೈಕ್ಷಣಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸುತ್ತ ಬಂದಿದೆ. ಪ್ರಸ್ತುತ 40ಕ್ಕೂ ಹೆಚ್ಚು ವಿವಿಧ ಶೈಕ್ಷಣಿಕ ಶಾಲಾ ಕಾಲೇಜುಗಳನ್ನು ಹೊಂದಿರುವ ಸಂಸ್ಥೆಯಲ್ಲಿ 15000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 1000ಕ್ಕೂ ಹೆಚ್ಚು ಸಿಬ್ಭಂದಿವರ್ಗ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ.

ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಮಾತ್ರವಲ್ಲದೆ, ಪದವಿ ಶಿಕ್ಷಣ, ತಾಂತ್ರಿಕ ಶಿಕ್ಷಣ, ಕಾನೂನು ಶಿಕ್ಷಣ, ವಾಣಿಜ್ಯ ಶಿಕ್ಷಣ, “ಔಷಧ ಶಿಕ್ಷಣ” ಹಾಗೂ “ಅನ್ವಯಿಕ ವಿಜ್ಞಾನ ಶಿಕ್ಷಣ”ವನ್ನು ನೀಡುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ವಿವಿಧ ಔದ್ಯೋಗಿಕ ಕ್ಷೇತ್ರಗಳಲ್ಲಿ ತಮ್ಮ ಹಿರಿಮೆಯನ್ನು ಸಾಧಿಸಿದ್ದಾರೆ. ಅರ್ಪಣ ಮನೋಭಾವದಿಂದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಉತ್ತಮ ಫಲಿತಾಂಶ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬಹುಸಂಖ್ಯೆಯಲ್ಲಿ ರ್ಯಾಂಕ್‍ಗಳನ್ನು ಪ್ರತಿ ವರ್ಷವು ಪಡೆಯುತ್ತಿದ್ದೇವೆ.

ಸಮಿತಿಗೆ ತನ್ನದೇ ಆದ ಕಾರ್ಯಕಾರಿ ಮಂಡಳಿ ಇದೆ ಸಮಿತಿಯ ನಿರ್ಧೇಶಕರು ಉತ್ತಮ ಶಿಕ್ಷಣ ನೀಡುವುದನ್ನು ತಮ್ಮ ಪರಮ ಗುರಿಯಾಗಿಸಿಕೊಂಡು ಸಂಸ್ಥೆಯ ಸ್ಥಾಪಕ ಸದಸ್ಯರ ಆಶಾಭಾವನೆಗಳನ್ನು ಮುಂದುವರೆಸುತ್ತಿದ್ದಾರೆ. ಎಲ್ಲಾ ವಿಭಾಗಗಳಲ್ಲೂ ಸುಸಜ್ಜಿತ ಕಟ್ಟಡ ಹೊಂದಿದ್ದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಂಸ್ಥೆಯ ಎಲ್ಲಾ ನೌಕರರು ಭಾಗವಹಿಸುತ್ತಾರೆ. 1998ರಲ್ಲಿ ಸಮಿತಿಯು ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿದ್ದು, ಸಂಸ್ಥೆಗೆ ಹಗಲಿರುಳು ದುಡಿದ ಶ್ರೀ. ನಾಗಪ್ಪಶೆಟ್ಟರ ನೆನಪಿನಲ್ಲಿ ಒಂದು ಪುಥ್ಥಳಿಯನ್ನು ಅನಾವರಣಗೊಳಿಸಲಾಗಿದೆ.


ಕಾರ್ಯದರ್ಶಿಗಳು,
ರಾಷ್ಟ್ರೀಯ ಶಿಕ್ಷಣ ಸಂಸ್ಥೆ (ರಿ)
ಬಾಲರಾಜ್ ರಸ್ತೆ, ಶಿವಮೊಗ್ಗ – 577201. ಕರ್ನಾಟಕ.
ಇ-ಅಂಚೆ : nescec@sancharnet.in
ಮುಖ ಪುಟ
ಎ. ಟಿ. ಎನ್. ಸಿ. ಸಿ ಬಗ್ಗೆ
ಆಡಳಿತ – ಎನ್. ಇ. ಎಸ್
ಲಭ್ಯವಿರುವ ಕೋರ್ಸಗಳು
ಪ್ರವೇಶಾತಿ
ಮಾನವ ಸಂಪನ್ಮೂಲ
ವಿಭಾಗಗಳು
ಸೌಲಭ್ಯಗಳು
ಗ್ರಂಥಾಲಯ
ಫೋಟೋ ಗ್ಯಾಲರಿ
ಡೌನ್ಲೋಡಗಳು
ನಮ್ಮನ್ನು ಸಂಪರ್ಕಿಸಿ
ಹಕ್ಕು ನಿರಾಕರಣೆ | ಗೌಪ್ಯತಾ ನೀತಿ | ಎಫ್. ಎ. ಕ್ಯೂ | ಜಾಲಪಟ | ಡೌನ್ಲೋಡ್‍ಗಳು
ನಮ್ಮನ್ನು ತಲುಪಲು | ಸಂಪರ್ಕಿಸಿ
ಅತ್ಯುತ್ತಮವಾದ ವೀಕ್ಷಣೆ 1600 X 900
ಕೃತಿಸ್ವಾಮ್ಯ © ಎ.ಟಿ.ಎನ್.ಸಿ.ಸಿ, ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ