ಸುದ್ದಿ ಮತ್ತು ಘಟನೆಗಳು
ತ್ವರಿತ ಲಿಂಕ್‍ಗಳು
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಶಿವಮೊಗ್ಗ.
ಕರ್ನಾಟಕದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ಶಿಕ್ಷಣ ಸಮಿತಿ(ರಿ.), ಶಿವಮೊಗ್ಗ ಇದರ ಅಂಗ ಸಂಸ್ಥೆಯಾದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು 1966ರಲ್ಲಿ ಕೇವಲ 21 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಈಗ ಒಂದು ಸಾವಿರಕ್ಕು ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಿ.ಕಾಂ. ಮತ್ತು ಬಿ.ಬಿ.ಎ. ಪದವಿಯಲ್ಲಿ ಓದುತ್ತಿದ್ದಾರೆ. 1974ರಿಂದ ಬಿ.ಬಿ.ಎಂ. ಪದವಿಯನ್ನು ಪ್ರಾರಂಭಿಸಲಾಗಿದೆ. ಅನೇಕ ವರ್ಷಗಳ ಕಾಲ ಮಲೆನಾಡು ಪ್ರಾಂತ್ಯದಲ್ಲಿ ವಾಣಿಜ್ಯ ಶಿಕ್ಷಣಕ್ಕೆ ಮೀಸಲಾದ ಏಕೈಕ ಕಾಲೇಜು ಎಂಬ ಹೆಗ್ಗಳಿಕೆಗೆ ಈ ಕಾಲೇಜು ಪಾತ್ರವಾಗಿದೆ. 1987ರವರೆಗೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟಿದ್ದು ಈಗ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಸೇರ್ಪಡೆಗೊಂಡಿದೆ.
ವಾಣಿಜ್ಯ ಮತ್ತು ನಿರ್ವಹಣಾ ಪದವಿಗಳನ್ನು ಪಡೆಯುತ್ತಿರುವ ನಮ್ಮ ವಿದ್ಯಾರ್ಥಿಗಳು ಬ್ಯಾಂಕುಗಳಲ್ಲಿ, ಕಂಪನಿಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಇತರೆ ಸೇವಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ಜೀವನ ಸಾಗಿಸುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಉದ್ಯೋಗ ಸೃಷ್ಠಿಸುವ ಉದ್ಯಮಿಗಳಾಗಿದ್ದಾರೆ. ಶಿವಮೊಗ್ಗ ನಗರದಲ್ಲಿ ಅಭ್ಯಾಸ ಮಾಡುತ್ತಿರುವ ಅನೇಕ ಸಿ.ಎ.ಗಳೂ ನಮ್ಮ ಕಾಲೇಜಿನವರಾಗಿದ್ದು, ಹಲವರು ವ್ಯಾಪಾರಿಗಳು, ತೆರಿಗೆ ಸಲಹಗಾರರು, ಉದ್ಯಮಿಗಳು, ಚಿತ್ರ/ನಾಟಕದ ತಾರೆಯರಾಗಿದ್ದಾರೆ.
ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ದೀರ್ಘಕಾಲದ ಕಾರ್ಯದರ್ಶಿಯವರಾಗಿದ್ದ ಶ್ರೀ ಎಸ್.ಆರ್. ನಾಗಪ್ಪ ಶೆಟ್ಟಿ, ಪ್ರಾರಂಭದ ಪ್ರಾಂಶುಪಾಲರಾದ ಶ್ರೀ ಟಿ. ಶ್ರೀನಿವಾಸಮೂರ್ತಿ ಮತ್ತು 26 ವರ್ಷಗಳ ಕಾಲ ಪ್ರಾಂಶುಪಾಲರಾಗಿದ್ದ ಪ್ರೊ. ಎಚ್.ಆರ್. ಗುರುಮೂರ್ತಿ ಶೆಟ್ಟಿ ಮೊದಲಾದವರ ಶ್ರಮದ ಪ್ರತಿಫಲವಾಗಿ ಎ.ಟಿ.ಎನ್.ಸಿ.ಸಿ. ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಕಾಲೇಜಿನ ಸಾಮಥ್ರ್ಯ ಮತ್ತು ನ್ಯಾಕ್ ಶಿಫಾರಸ್ಸಿನ ಅನ್ವಯ ಕಾಲೇಜನ್ನು ಶ್ರೇಷ್ಟತೆಯ ಸಾಮಥ್ರ್ಯವುಳ್ಳ ಕಾಲೇಜು ಎಂದು ಗುರುತಿಸಲಾಯಿತು ಹಾಗೂ ಎಂ.ಕಾಂ. ಪದವಿಯನ್ನು 2011-12 ಆಗಸ್ಟ್ ರಲ್ಲಿ ಪ್ರಾರಂಭಿಸಲಾಯಿತು. ಡಾ. ಎ. ವೆಂಕಟರಾಜು ಅವರು ಎಂ.ಕಾಂ. ವಿಭಾಗದ ನಿರ್ದೇಶಕರಾಗಿದ್ದಾರೆ. ಶೈಕ್ಷಣಿಕ ಗುಣಮಟ್ಟಕ್ಕೆ ಪ್ರಥಮ ಆದ್ಯತೆಯನ್ನು ಕಾಲೇಜು ನೀಡಿದೆ. ಆದ್ದರಿಂದಲೇ ಪ್ರತಿವರ್ಷ ತಪ್ಪದೇ ಅನೇಕ ರ‍್ಯಾಂಕುಗಳನ್ನು ಕಾಲೇಜು ಪಡೆಯುತ್ತಿದೆ. ಕೆಲವು ವರ್ಷಗಳು ಹತ್ತು- ಹನ್ನೆರಡು ರ‍್ಯಾಂಕುಗಳನ್ನು ಕಾಲೇಜು ಪಡೆದಿದ್ದು “ರ‍್ಯಾಂಕುಗಳ ಲೂಟಿ” ಎಂದು ಪತ್ರಿಕೆಗಳು ವರದಿ ಮಾಡಿದೆ. ಒಂದು ದಶಕಗಳ ಕಾಲ ನಮ್ಮ ಕಾಲೆಜು ಸಂಶೋಧನಾ ಕೇಂದ್ರ (ರೀಸರ್ಚ ಸೆಂಟರ್) ಎಂದು ಗುರುತಿಸ್ಪಟ್ಟಿದ್ದು ಡಾ. ಡಿ.ಎಂ. ಬಸವರಾಜ ಮತ್ತು ಡಾ.ಎ.ವೆಂಕಟರಾಜು ಮಾರ್ಗದರ್ಶನದಲ್ಲಿ ಸುಮಾರು ಹತ್ತು ಜನ ವಿದ್ಯಾರ್ಥಿಗಳು ಪಿ.ಹೆಚ್‍ಡಿ. ಪದವಿ ಪಡೆದಿದ್ದಾರೆ.
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅನೇಕ ವಿಚಾರ ಸಂಕಿರಣಗಳನ್ನು ಕಾಲೇಜು ಏರ್ಪಡಿಸಿ ವಾಣಿಜ್ಯ ಮತ್ತು ನಿರ್ವಹನಾ ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಲಾಗಿದೆ. ಐವತ್ತು ವರ್ಷಗಳನ್ನು ಪೊರೈಸಿರುವ ಕಾಲೇಜು 2017-18ರಲ್ಲಿ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿತು. ಕಾಲೇಜಿನಲ್ಲಿ ಉತ್ತಮವಾದ ಕೊಠಡಿಗಳು, ಕಂಪ್ಯೊಟರ್ ಲ್ಯಾಬ್, ಪೂರ್ಣ ಗಣಕೀಕೃತಗೊಂಡ ಕಾರ್ಯಾಲಯ ಮತ್ತು ಗ್ರಂಥಾಲಯ ಇದೆ. ಮಲ್ಟಿಜಿಮ್, ಸಹಕಾರ ಸಂಘ, ಎನ್.ಸಿ.ಸಿ., ಎನ್.ಎಸ್.ಎಸ್. ಮತ್ತು ಕ್ರೀಡಾ ವಿಭಾಗಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಪಠ್ಯೇತರ ಚಟುವಟಿಕೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾರೆ. ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕವೃಂದ ಕಾಲೇಜಿನ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.
ಅತ್ಯುತ್ತಮವಾದ ವೀಕ್ಷಣೆ 1600 X 900
ಕೃತಿಸ್ವಾಮ್ಯ © ಎ.ಟಿ.ಎನ್.ಸಿ.ಸಿ, ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ